Home

ಬನ್ನೂರು ಸ್ಥಳೀಯ ಸಂಸ್ಥೆಯ ಬಗ್ಗೆ

            ಬನ್ನೂರು ಸ್ಥಳೀಯ ಸಂಸ್ಥೆಯು 1952ರಲ್ಲಿ ಪುರಸಭೆಯಾಗಿ ಪ್ರಾರಂಭಗೊಂಡು 1995ರಲ್ಲಿ ಪಟ್ಟಣ ಪಂಚಾಯತಿಯಾಗಿ ಮಾರ್ಪಾಡಾಗಿ ಮತ್ತೆ 2001ರ ಜನಸಂಖ್ಯಾ ಸಮೀಕ್ಷೆಯಂತೆ 23,525ಜನಸಂಖ್ಯೆ ಆದಾರದ ಮೇರೆ 2007ರಿಂದ ಪುರಸಭೆಯಾಗಿ ಮಾರ್ಪಾಡಾಗಿರುತ್ತದೆ.ಬನ್ನೂರು ಪಟ್ಟಣವು ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿದ್ದು ಮೈಸೂರಿನಿಂದ 25ಕಿ.ಮೀ ದೂರದಲ್ಲಿರುತ್ತದೆ. ಬನ್ನೂರು ಪಟ್ಟಣದಲ್ಲಿ 23 ವಾರ್ಡ್ ಗಳಿದ್ದು 23 ಜನ ಚುನಾಯಿತ ಪ್ರತಿನಿಧಿಗಳಿರುತ್ತಾರೆ ಹಾಗೂ 5 ಜನ ನಾಮ ನಿರ್ದೇಶನ ಸದಸ್ಯರುಗಳಿರುತ್ತಾರೆ. ಬನ್ನೂರು ಪಟ್ಟಣವು 7.5ಚ.ಕಿ.ಮೀ ಗಳಷ್ಟು ವ್ಯಾಪಿಸಿರುತ್ತದೆ.

            ಪಟ್ಟಣದಲ್ಲಿ ಕಬ್ಬು ಮತ್ತು ಭತ್ತವನ್ನು ಹೆಚ್ಚಾಗಿ  ಬೆಳೆಯುವುದರಿಂದ ಬನ್ನೂರು ಪಟ್ಟಣಕ್ಕೆ "ಹಸಿ ಭತ್ತ , ಬಿಸಿ ಬೆಲ್ಲ"ದ ತವರೂರು ಎನ್ನುತ್ತಾರೆ. ಪಟ್ಟಣವು ಕಾವೇರಿ ನದಿಯ ತೀರದಲ್ಲಿರುತ್ತದೆ ಹಾಗೂ ಕುಡಿಯುವ ನೀರನ್ನು ಕಾವೇರಿ ನದಿಯಿಂದಲೇ ಒದಗಿಸುತ್ತಾರೆ. ಹಾಗೂ ಬನ್ನೂರು ಪಟ್ಟಣವು ಸೋಮನಾಥಪುರ, ಶಿವನ ಸಮುದ್ರ ಶ್ರೀರಂಗಪಟ್ಟಣ ಮತ್ತು ಟಿ.ನರಸೀಪುರ ಊರುಗಳಿಂದ ಸುತ್ತುವರೆದಿದೆ. ಬನ್ನೂರಿನಲ್ಲಿ ಹೇಮಾಂದ್ರಮ್ಮ, ಕೋದಂಡರಾಮ, ಬಿಸಿಲು ಮಾರಮ್ಮ ತೀರ್ಥರಾಮೇಶ್ವರ, ವ್ಯಾಸರಾಜ ಮಠ ಹಾಗೂ ಕರಿಯಪ್ಪ ಸ್ವಾಮಿ ದೇವಸ್ಥಾನಗಳಿಂದ ಪ್ರಸಿದ್ಧಿಯಾಗಿದೆ. ಪ್ರತಿ ವರ್ಷವು ಹೇಮಾದ್ರಮ್ಮನ ಜಾತ್ರೆಯು ಫೆಬ್ರವರಿ ಮಾಹೆಯಲ್ಲಿ ಬಹು ಅಧ್ದೂರಿಯಿಂದ ಎಲ್ಲಾ ಕುಲಬಾಂಧವರು ಸೇರಿ ನಡೆಸುತ್ತಾ ಇಲ್ಲಿನ ಜನರು ಸ್ನೇಹ ಜೀವಿಗಳಾಗಿ ಬನ್ನೂರಿನ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.


 Brief About Bannur TMC

         Bannur Tmc Has Been Constituted in 1952 as TMC Then at 1995 it Transffered as TP And then as per 2001 Census again tranferred as TMC at 2007. Bannur has the Highway of Mysore-Malavalli Road and just 25km away from Historical City, MYSORE. it is stretches to an area of 7.5 Sq.m and it has 23 wards and Same No. of Councillors and 5 Members of Nominee Councillors.

      The phrase “HASI BHATTA, BISI BELLA” which signifies the prominance of Bannur town. It is famous for “ PADDY & JAGGRY”.Bannur town is surrounded by Historical  Towns like Srirangapatna, Somanathpura ,Mysore, T.Narasipura, Talakadu and  ‘SHIMSHA’ ad the town Consists  of ancient temple's of Lord Theertha Rameshwara , Kodanda Rama, Eshwara  & Hemadramba.  It’s on the banks of the "Southern  Ganga's"-River Cauvery.


ಗಣಕೀಕರಣ

            ಬನ್ನೂರು ಪುರಸಭೆಯಲ್ಲಿ 1990ರಿಂದ ಇಲ್ಲಿಯ ತನಕ ಜನನ ಮತ್ತು  ಮರಣ ದಾಖಲೆಗಳ್ನು ಗಣಕೀಕೃತಗೊಳಿಸಿ ಈ ಸೇವೆಯನ್ನು ದಿ:26.02.2010ರಿಂದ ಜಾರಿಗೆ ತಂದು ಜನನ ಮರಣ ಪತ್ರಗಳನ್ನು ಧೃಢೀಕರಿಸಿ ವಿತರಿಸಲಾಗುತ್ತಿದೆ.ಹಾಗೂ ದಿ:02.03.2010ರಿಂದ 24ಘಂಟೆ ಕಾರ್ಯ ನಿರ್ವಹಿಸುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ಘಟಕವನ್ನು ತೆರೆಯಲಾಗಿದ್ದು ದೂರುಗಳನ್ನು ದಾಖಲಿಸಲು ಸಹಾಯವಾಣಿ ಸಂ:08227-276111 ದೂರವಾಣಿಯನ್ನು ಅಳವಡಿಸಲಾಗಿ ನಾಗರೀಕರುಗಳು ಆನ್ ಲೈನ್ ಮೂಲಕ, ದೂರವಾಣಿ ಮೂಲಕ ಹಾಗೂ ಖುದ್ದಾಗಿ ದೂರುಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. 


Computerization

          We are happy to intimate the citizens of Bannur town that we have computerized the Birth & Death Records registered with us from the Year 1990 to On Date under KARNATAKA MUNICIPAL REFORMS PROJECT (KMRP). Now the Citizens are requested to visit the Citizen Service Centre to Register the BIRTH/DEATH records and get of BIRTH/DEATH Certificates by paying Nominal Service fee of Rs15/- with the First Copy served as Free of Cost.

             “PUBLIC GRIEVENCE REDRESSAL CELL” – PGR has been opened to address and Solve the Complaints of Publics within the stipulated time. Any Citizen in Person or Online or through Phone Call can register their Complaints at Our PGR CELL around the Clock (24 Hours/365 Days). Contact No. of PGR is 08227-276111.

 


 

ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು

     ಇಂದು ನಗರ ಜೀವನ ವ್ಯವಸ್ಥೆಯು ಸಮಪðಕವಾಗಿರಲು ಸಕಾðರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪುರಸಭೆಯ ಮುಖಾಂತರ ಈ ಕೆಳಕಂಡ ಕತðವ್ಯಗಳನ್ನು ನಿವðಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿವðಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿವðಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾಯðಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿವðಹಣೆಯಲ್ಲಿ ಮತ್ತು ಇತರೆ ಕಾಯð ನಿವðಹಣೆಯಲ್ಲಿ ಪಾರದಶðಕತೆ ಇರಬೇಕು.

ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ:

  • ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
  • ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
  • ಆಥಿðಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
  • ರಸ್ತೆಗಳು ಮತ್ತು ಸೇತುವೆಗಳನ್ನು ನಿಮಿðಸುವುದು.
  • ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
  • ಜನರ ಆರೋಗ್ಯ, ನೈಮðಲ್ಯ ಕಾಪಾಡುವುದು.
  • ಸಮಾಜದ ದುಬðಲ ವಗðಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
  • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
  • ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
  • ಬೀದಿದೀಪ, ಬಸ್ ನಿಲ್ದಾಣ, ಸಾವðಜನಿಕ ಶೌಚಾಲಯಗಳಂಥ ಮೂಲಸೌಕಯðಗಳನ್ನು ಒದಗಿಸುವುದು.
  • ಶ್ಮಶಾನ ಮತ್ತು ಶ್ಮಶಾನಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕಯðಗಳನ್ನು ಒದಗಿಸುವುದು.
  • ಜನನ-ಮರಣ ನೊಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
  • ಕಸಾಯಿಖಾನೆಗಳ ನಿಯಂತ್ರಣ.
  • ಸಕಾðರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
  • ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
  • ರಸ್ತೆ, ಬೀದಿಗಳ ದುರಸ್ತಿ ಮತ್ತು ನಿವðಹಣೆ.
  • ಅಪಾಯಕಾರಿ ರೋಗಗಳ ನಿಯಂತ್ರಣೆ.

ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾವðಜನಿಕ ಸೌಲಭ್ಯ ರಚನೆ ಮತ್ತು ನಿವðಹಣೆಯಲ್ಲಿ ಸದಾ ತೊಡಗಿರುತ್ತದೆ.

This Page is Maintained By : Chief Officer                                                                          Modified Date : 06/01/2012

No. Of Visitors :
Last Updated   : 18/05/2012  Release History
Release 2.0.0, Powered By Karnataka Municipal Data Society & maintained by Bannur TMC
This website can best viewed with the resolution 1024 * 768 using Internet Explorer 7.0 or above.
Valid CSS!